About Pallagatti
Adavappa Arts College Tiptur When
the Kalpataru Vidya Samsthe Trust was formed in
1962, to administer Kalpataru College, it
offered all the three streams of arts, science
and commerce. The college flourished for two
decades until the strength exceeded 2,500
students. The college had to be bifurcated
according to the directions of the collegiate
education. So, an independent college for the
Arts and Commerce streams was established in the
year 1982 and was named after the founder
president and philanthropist, Pallagatti
Adavappa, while, the science college retained
the name Kalpataru.
KALPATARU VIDYA SAMSTHE (R), TIPTUR (ESTD.1961)
: Kalpataru Vidya Samsthe, an important
centre for higher education has dispersed
knowledge to the local rural masses for nearly
six decades and has grown from strength to
strength over these years. KVS is instrumental
in putting Tiptur on the map of the academia.
Today, the Management is flourishing with eight
sister institutions one more reputed than the
other.
Message
from the principal
Dear students, Faculty and Visitors
It is with immense pride and a deep sense of
commitment that I welcome you to Pallagatti
Adavappa Arts and Commerce First Grade College,
Tiptur an Institution under Kalpataru Vidya
Samsthe is dedicated to fostering academic
excellence, ethical values, and holistic
development since its inception in 1962. For
over six decades, our college has been a beacon
of knowledge, shaping generations of students
from rural area into responsible and
accomplished individuals. [In 1982 because of
huge strength the Kalpataru College got
bifurcated as Pallagatti Adavappa Arts and
Commerce First Grade College and Kalpataru
Science College].
Guided by our vision of Education for Wisdom,
Conduct, and Livelihood, we aspire to cultivate
an environment where learning transcends
classrooms, empowering students with
intellectual depth, professional competence and
moral integrity. Our mission is to make quality
education accessible to all, nurturing
individuals who are not only knowledgeable but
also socially responsible and culturally
refined.
In an era of rapid global transformations, we
take pride in offering a green campus, a
digitalized library, experiential learning
through NSS, Scouts and Guides, Red Cross and
cutting edge add-on course like Tally
Solutions, ensuring that our students are
equipped with both traditional wisdom and modern
skills. Our mentoring system and expert faculty
provide personalized guidance, fostering a
culture of curiosity, critical thinking and a
lifelong learning.
Recognizing the importance of career
opportunities, our institution has started
organizing Job fair bringing together leading
recruiters and aspiring professionals under one
roof so that it bridges the gap between academia
and industry, helping students transition
seamlessly into the professional word.
As a college with rich legacy, we have
consistently adapted to the changing educational
landscape while preserving our core values.
Education at our institute is not just about
academic success- it is about building
character, fostering leadership and inspiring
innovation. We encourage our students to dream
beyond boundaries, embrace challenges and
contribute meaningfully to society.
As we continue this journey of enlightenment and
progress, I extend my heartfelt gratitude to our
faculty, students, alumni, and stakeholders who
contribute to the legacy of our institution. I
invite you to explore our website and be part of
this vibrant academic community.
Together, let us strive for excellence, wisdom,
and a future rich in possibilities.
Warm Regards, Dr Vijaya Kumari TR
Principal Pallagatti Adavappa Arts and Commerce
First Grade College, Tiptur
click on the image for more
click on the image for more
click on the image to read more
Freshers Day
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ
:05-09-2025ರ ಪ್ರಯುಕ್ತ ದಿನಾಂಕ: 08-09-2025
ಮತ್ತು ದಿನಾಂಕ: 09-09-2025ರ ಎರಡು ದಿನ ಎಲ್ಲಾ
ಬೋಧಕರಿಗೂ ಎಲ್ಲಾ ವಿದ್ಯಾರ್ಥಿಗಳು ಕ್ರೀಡೆಯನ್ನು
ಏರ್ಪಡಿಸಿದರು. ನಂತರ ಶಿಕ್ಷಕರ ದಿನಾಚರಣೆಯನ್ನು
ಆಚರಿಸಲಾಯಿತು.
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜು ತಿಪಟೂರಿನಲ್ಲಿ
ದಿನಾಂಕ:01-09-2025 ರಂದು "ವಿಶ್ವ ಪೌಷ್ಠಿಕ
ಆಹಾರ" ದಿನಾಚರಣೆಯನ್ನು ಆಚರಿಸಲಾಯಿತು.
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜು ತಿಪಟೂರಿನಲ್ಲಿ
ದಿನಾಂಕ:29-08-2025 ರಂದು ಕ್ರೀಡಾ
ದಿನಾಚರಣೆಯನ್ನು ಆಚರಿಸಲಾಯಿತು.
Folklore Day Celebration Brings Cultural
Vibrance to PAAC College On
August 22, 2025, Pallagatti Adavappa
Arts and Commerce College (PAAC) came
alive with colors, rhythms, and melodies
as it celebrated a vibrant Folklore Day.
The event highlighted the richness of
traditional folk culture and its
timeless relevance in modern life. The
celebration featured renowned folk
expert and retired primary school
teacher, Sri Ragi Thimmaiah, who
captivated the gathering with his deep
knowledge and soulful renditions of
traditional folk songs. In his engaging
talk, he beautifully explained the
significance of folk songs in everyday
life, sharing how they have always
accompanied people through diverse
situationsbe it the joy of marriage
ceremonies, the rhythm of grinding ragi,
or the tender emotions of love. His live
performance of traditional songs for
these occasions mesmerized the audience,
making the event an interactive and
memorable experience. Each song
resonated with the spirit of the land,
reminding everyone how these melodies
once made work more spontaneous,
natural, and energizing. The program
stood as a testament to our rich
cultural heritage, inspiring students
and faculty alike to cherish and
preserve the traditional art forms that
continue to influence our society today.
ದಿನಾಂಕ:12-08-2025 ರಂದು ಸಮಯ: 12.30ಕ್ಕೆ
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜು,ತಿಪಟೂರಿನಲ್ಲಿ
ಗ್ರಂಥಪಾಲಕರ ದಿನವನ್ನು ಆಚರಿಸಲಾಯಿತು.
Tumkur University Intercollegiate men
Table-Tennis tournament 2024-25.
Pallagatti Adavappa College secured
Runner-up trophy.
ದಿನಾಂಕ 23-06-2025 ರಂದು ತುಮಕೂರು
ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಸಾರ್ವಜನಿಕ
ಆಡಳಿತ ಅಧ್ಯಯನ ಮತ್ತು ಸಂಶೋಧನ ವಿಭಾಗ ಇವರು
ವಿಶ್ವ ಪರಿಸರ ದಿನ ಅಂಗವಾಗಿ ಹಮ್ಮಿಕೊಂಡಿದ್ದ
ವೇದ್ಯ ಸ್ಪರ್ಧ ಕಾರ್ಯಕ್ರಮದಲ್ಲಿ ಚಿತ್ರಕಲಾ
ಸ್ಪರ್ಧೆಯಲ್ಲಿ ನಮ್ಮ ಕಾಲೇಜಿನ ದ್ವಿತೀಯ ಬಿಎ
ವಿದ್ಯಾರ್ಥಿ ಡ್ಯಾನಿಯಲ್ ಪ್ರಥಮ ಬಹುಮಾನ ಹಾಗೂ
ಸೌಂದರ್ಯ ತೃತೀಯ ಬಿಎ ವಿದ್ಯಾರ್ಥಿ ದ್ವಿತೀಯ
ಬಹುಮಾನ ಪಡೆದಿರುತ್ತಾರೆ ಎಂದು ತಿಳಿಸಲು
ಹರ್ಷಿಸುತ್ತೇನೆ. ಬಹುಮಾನಿತರಿಗೆ ಧನ್ಯವಾದಗಳು.
ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ 2024-25 :
ದಿನಾಂಕ:11-06-2025
ಪಲ್ಲಾಗಟ್ಟಿ
ಅಡವಪ್ಪ ಕಾಲೇಜು, ತಿಪಟೂರು.
ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ
2024-25 ದಿನಾಂಕ 11-06-2025 ಬುಧವಾರ ಬೆಳಿಗ್ಗೆ 11:15
ಕ್ಕೆ ಸರಿಯಾಗಿ ಕಾಲೇಜು ಮೈದಾನದಲ್ಲಿ ವಾರ್ಷಿಕ
ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು
ಹಮ್ಮಿಕೊಳ್ಳುತ್ತಿದ್ದು, B.A.,B.Com.,B.B.A.
ಹಾಗೂ M.Com. ವಿದ್ಯಾರ್ಥಿಗಳು ಸಕ್ರೀಯವಾಗಿ
ಕ್ರೀಡಾಕೂಟದಲ್ಲಿ ಭಾಗವಹಿಸಲು ಸೂಚಿಸಲಾಗಿದೆ.
ಕ್ರೀಡೆಗಳ ವಿವರ
1. 100 ಮೀ.ಓಟ
2. 200 ಮೀ.ಓಟ
3. 400 ಮೀ.ಓಟ
4. 800 ಮೀ.ಓಟ
5. 1500 ಮೀ.ಓಟ
6. 4x100 ಮೀ.ರಿಲೇ ಓಟ
7. ಗುಂಡು ಎಸೆತ
8. ಚಕ್ರ ಎಸೆತ
9. ಉದ್ದ ಜಿಗಿತ
10. ಜಾವಲಿನ್ ಎಸೆತ
ವಿಶೇಷ ಸೂಚನೆ
1.ಎಲ್ಲರೂ ಕ್ರೀಡಬ್ಯಾಸದಲ್ಲಿ
ತೊಡಗಿಸಿಕೊಂಡು,ಕಡ್ಡಾಯವಾಗಿ ಭಾಗವಹಿಸುವುದು.
2.ಪ್ರತಿಯೊಬ್ಬ ಕ್ರೀಡಾಪಟು ಗರಿಷ್ಠ ಒಟ್ಟು 4
ಕ್ರೀಡೆಗಳಲ್ಲಿ ಮಾತ್ರ ಭಾಗವಹಿಸಬಹುದು.
3.ಕ್ರೀಡಾಕೂಟದಲ್ಲಿ ಭಾಗವಹಿಸುವವರು short ಹಾಗೂ
T- shirt ದರಿಸುವುದು.(Pant ಧರಿಸಿ
ಕ್ರೀಡೆಗಳಲ್ಲಿ ಭಾಗವಹಿಸುವಂತಿಲ್ಲ)
4. ಭಾಗವಹಿಸುವವರು ಹೆಸರನ್ನು
ನೋಂದಾಯಿಸಿಕೊಳ್ಳಬೇಕು.
5.ಕ್ರೀಡಾಕೂಟದಲ್ಲಿ ಹೆಚ್ಚು ಚಿನ್ನದ ಪದಕ ಪಡೆದ
ಇಬ್ಬರು(1 ಪುರುಷ ಹಾಗೂ 1
ಮಹಿಳೆ)ಕ್ರೀಡಾಪಟುಗಳಿಗೆ ಚಾಂಪಿಯನ್ ಪ್ರಶಸ್ತಿ
ನೀಡಲಾಗುವುದು.
6. ವಿಜೇತರಿಗೆ(1st ,2nd,3rd place)ಕಾಲೇಜು ಪ್ರತಿಭಾ ಶ್ರೀ ಕಾರ್ಯಕ್ರಮದಲ್ಲಿ
ಟ್ರೋಫಿ ಹಾಗೂ ಪ್ರಮಾಣ ಪತ್ರ ನೀಡಿ
ಅಭಿನಂದಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಶ್ರೀನಿವಾಸ್, ದೈಹಿಕ
ಶಿಕ್ಷಣ ನಿರ್ದೇಶಕರು ಪಲ್ಲಾಗಟ್ಟಿ ಅಡವಪ್ಪ
ಕಾಲೇಜು,ತಿಪಟೂರು.ಇವರನ್ನು ಸಂಪರ್ಕಿಸುವುದು
9008990336
ಸುವರ್ಣ
ಗಿರಿ ಮತ್ತು ರತ್ನಗಿರಿ ಪ್ರದೇಶಗಳು ಅಶೋಕನ
ನೆಲವಾಗಿತ್ತು. ಪಶು ಪಕ್ಷಿಗಳ ಆರೋಗ್ಯವನ್ನು
ಕಾಪಾಡುವುದು ಅಶೋಕ ಚಕ್ರವರ್ತಿಯ ಸುಖೀ ರಾಜ್ಯ
ಕಲ್ಪನೆಯಾಗಿತ್ತು. ಮೌರ್ಯ ಚಕ್ರವರ್ತಿಗೆ
ಪ್ರಜಾಸಕ್ತಿ ಇತ್ತು ಎಂದು ಪಲ್ಲಾಗಟ್ಟಿ ಅಡವಪ್ಪ
ಕಾಲೇಜಿನ ಇತಿಹಾಸ ಇತಿಹಾಸ ವಿಭಾಗ ದಿನಾಂಕ
28/05/2025 ರಂದು ಹಮ್ಮಿಕೊಂಡಿದ್ದ " ಕರ್ನಾಟಕದ
ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆ " ಎಂಬ
ವಿಷಯವಾಗಿ ಡಾ. ಮಲ್ಲಿಕಾರ್ಜುನ ಜವಳಿ. ನಿವೃತ್ತ
ಪ್ರಾಧ್ಯಾಪಕರು ದಾವಣಗೆರೆ ಅಭಿಪ್ರಾಯ ಪಟ್ಟರು.
ತಿಳಿಯದವರು, ಅರ್ಥೈಸಿಕೊಳ್ಳದವರು, ಇತಿಹಾಸವನ್ನು
ಕಟ್ಟಲಾರರು, ಬನವಾಸಿಯ ಕದಂಬರ ಶಾಸನಗಳು, ಮೌರ್ಯ
ಶಾಸನಗಳ ಉದ್ದೇಶವನ್ನು ತಿಳಿಸಿದರು. ಪಾರಂಪರಿಕ
ರಾಜರ ದೃಷ್ಟಿಕೋನವನ್ನು ಸ್ಮರಿಸಿದರು. ಇತಿಹಾಸದ
ಪರಂಪರೆಯಲ್ಲಿ ಅಶೋಕ ಸಾಮ್ರಾಟ ದೂರ ದೃಷ್ಟಿಯುಳ್ಳ
ರಾಜನಾಗಿದ್ದ ಎಂದು ತಿಳಿಸಿದರು. ವಿದ್ಯಾರ್ಥಿಗಳು
ಈ ನಾಡಿನ ಇತಿಹಾಸ, ಸಂಸ್ಕೃತಿ ಪರಂಪರೆಯನ್ನು
ಅರಿಯಲೇಬೇಕು ಅರಿತರೆ ಮಾತ್ರ ಅವುಗಳನ್ನು ಯುವಕರು
ನಿರ್ಮಿಸಬಲ್ಲರು. ಕರ್ನಾಟಕದ ಶ್ರೀಮಂತ ಪರಂಪರೆ
ಬನವಾಸಿ ಕದಂಬರಿಂದ ಆರಂಭವಾಗಿ ಇಲ್ಲಿಯವರೆಗೆ
ನಡೆದು ಬಂದಿದೆ ಎಂದು ತಿಳಿಸಿದರು. ಈ ಉಪನ್ಯಾಸಕ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ
ಡಾ. ವಿಜಯ ಕುಮಾರಿ ವಹಿಸಿ ಇಂತಹ ಉಪನ್ಯಾಸಗಳು
ಕಾಲೇಜಿನ ಶೈಕ್ಷಣಿಕ ಆಂತರಿಕ ಗುಣಮಟ್ಟವನ್ನು
ಹೆಚ್ಚಿಸುತ್ತವೆ, ವಿದ್ಯಾರ್ಥಿಗಳಿಗೆ ಶ್ರೀಮಂತ
ಪರಂಪರೆಯ ಹರಿವನ್ನು ಮೂಡಿಸುತ್ತವೆ ಎಂದು
ಅಭಿಪ್ರಾಯ ಪಟ್ಟರು. ಉಪನ್ಯಾಸಕರಾದ ಲೋಕೇಶ್
ವರಯ್ಯ ಸ್ವಾಗತಿಸಿ, ಮುಖ್ಯಸ್ಥರಾದ ಡಾಕ್ಟರ್ ಲಲಾ
ಟಾಕ್ಷ ಮೂರ್ತಿ ಪ್ರಾಸ್ತಾವಿಕ ಮಾತಾಡಿ,
ಮತ್ತೊಬ್ಬ ಪ್ರಾಧ್ಯಾಪಕರಾದ ಸಿದ್ದಲಿಂಗ ಮೂರ್ತಿ
ಎಂ ರವರು ವಂದಿಸಿದರು. ಕುಮಾರಿ ಚಂದನ ಕಾರ್ಯಕ್ರಮ
ನಿರೂಪಿಸಿದರು.
ದಿನಾಂಕ :05-05-2025ರಂದು
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು
ವಾಣಿಜ್ಯ ಕಾಲೇಜು ತಿಪಟೂರಿನಲ್ಲಿ ರೋಟರಿ ಕ್ಲಬ್
ಕಾರ್ಯಗಾರವನ್ನು ನಡೆಸಲಾಯಿತು.
ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ
ಸ್ವಾಮಿ ಜಾತ್ರಾ ಮಹೋತ್ಸವ ಹಾಸನ : ಸ್ಕೌಟ್ ಅಂಡ್
ಗೈಡ್ ಸ್ವಯಂ ಸೇವಾ ಶಿಬಿರ
ಆಳ್ವಾಸ್ ವಿರಾಸತ್
ಸ್ಕೌಟ್ಸ್ ಅಂಡ್ ಗೈಡ್ ರೋವರ್ಸ್ ಅಂಡ್ ರೇಂಜರ್ಸ್
ಸಾಂಸ್ಕೃತಿಕ ಶಿಬಿರ
ಕಾಲೇಜು ಶಿಕ್ಷಣ ಇಲಾಖೆ, ತುಮಕೂರು
ವಿಶ್ವವಿದ್ಯಾಲಯ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು
ವಾಣಿಜ್ಯ ಕಾಲೇಜಿನ ವತಿಯಿಂದ ಹಮ್ಮಿಕೊಂಡಿರುವ
NSS ವಾರ್ಷಿಕ ವಿಶೇಷ ಶಿಬಿರ ಚಿಕ್ಕಹೊನ್ನವಳ್ಳಿ
ದಿನಾಂಕ:28-04-2025 ಮತ್ತು 29-04-2025ರಂದು
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜಿ ವಾಣಿಜ್ಯ ವಿಭಾಗದ
ವಿದ್ಯಾರ್ಥಿಗಳಿಂದ ಕೈಗಾರಿಕಾ ಮತ್ತು ಶೈಕ್ಷಣಿಕ
ಪ್ರವಾಸವನ್ನು ಕೈಗೊಳ್ಳಲಾಗಿತು.
ದಿನಾಂಕ:09-04-2025ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನ
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಕೈಗಾರಿಕ
ವಿಕ್ಷಣೆ.
ದಿನಾಂಕ:15-04-2025 ಮತ್ತು 16-04-2025ರಂದು
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜಿನಿಂದ 2 day Workshop on
Innovative Approaches to Company
Analysis Reports Organized by
Department Of Commerce in Co-ordination
With IQAC and Department of MBA, K.I.T,
Tiptur. ವತಿಯಿಂದ ಕಾರ್ಯಗಾರ ನಡೆಸಲಾಯಿತು.
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವಿಭಾಗದಿಂದ
23 ಏಪ್ರಿಲ್ 2025 ರಂದು ವಿಶ್ವ ಪುಸ್ತಕ
ದಿನಾಚರಣೆಯನ್ನು ಅಚರಿಸಲಾಯಿತು. ಕಲ್ಪತರು ವಿದ್ಯಾ
ಸಂಸ್ಥೆಯ ಕಾರ್ಯದರ್ಶಿಗಳಾದ ಎಚ್ ಜಿ ಸುಧಾಕರ್
ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಾಮಾಜಿಕ
ಮಾಧ್ಯಮ ಮತ್ತು ಮೊಬೈಲ್ ಗಳಿಂದ ಇಂದಿನ
ಯುವಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ
ಕಣ್ಮರೆಯಾಗುತ್ತಿವೆ. ದಯಮಾಡಿ ಪುಸ್ತಕ ಓದುವ
ಹವ್ಯಾಸ ರೋಡಿಸಿಕೊಳ್ಳಿ ಎಂದು ಯುವಕರಿಗೆ ಕರೆ
ನೀಡಿದರು. ಗ್ರಂಥಪಾಲಕರಾದ ಇರುದಯ ಮೇರಿ ಈ
ದಿನದಂದು ನಿಧನರಾದ ವಿಲಿಯಂ ಷೇಕ್ಸ್‌ಪಿಯರ್,
ಮಿಗುಯೆಲ್ ಸೆರ್ವಾಂ ಟೆಸ್ ಮತ್ತು ಇಂಕಾ
ಗಾರ್ಸಿಲಾಸೊ ಡಿ ಲಾ ವೆಗಾ ಸೇರಿದಂತೆ ಪ್ರಸಿದ್ಧ
ಲೇಖಕರಿಗೆ ಗೌರವ ಸಲ್ಲಿಸಲು ಈ ದಿನವನ್ನು ವಿಶ್ವ
ಪುಸ್ತಕ ದಿನವಾಗಿ ಘೋಷಿಸಲಾಯಿತು ಹಾಗಾಗಿ ಈ
ದಿನವನ್ನು ನಾವೆಲ್ಲರೂ ವಿಜೃಂಭಣೆಯಿಂದ ಆಚರಿಸಬೇಕು
ಎಂದು ಯುವಕರಲ್ಲಿ ಪ್ರೇರೇಪಿಸಿದರು. ಇದೇ ದಿನದಂದು
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ
ಪ್ರೊಫೆಸರ್ ಎಸ್ ಎಸ್ ಮಲ್ಲಿಕಾರ್ಜುನ ಪ್ರಸನ್ನ
ಅವರು ಸಹ ಬರಹಗಾರರಾಗಿ ರಚಿಸಿರುವ "ಮಾಡ್ರನ್
ಬ್ಯಾಂಕಿಂಗ್" ಎಂಬ ಪುಸ್ತಕವನ್ನು
ಬಿಡುಗಡೆಗೊಳಿಸಲಾಯಿತು. ಪುಸ್ತಕದ ಕುರಿತು
ಮಾತನಾಡಿದ ಅವರು ಮಾಡ್ರನ್ ಬ್ಯಾಂಕಿಂಗ್
ವ್ಯವಸ್ಥೆಯಿಂದ ಕಪ್ಪು ಹಣವನ್ನು ಕಡಿಮೆ ಮಾಡಬಹುದು
ಹಾಗೂ ಡಿಜಿಟಲೀಕರಣದತ್ತ ಸಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ
ಪ್ರೊಫೆಸರ್ ಸಿ ಎಂ ಎಸ್ ಲೊಕೇಶ್ವರಯ್ಯರವರು
ಗ್ರಂಥಾಲಯದಲ್ಲಿ 75,596 ಸಾವಿರ ಪುಸ್ತಕಗಳಿವೆ
ವಿದ್ಯಾರ್ಥಿಗಳು ಈ ಅವಕಾಶವನ್ನು
ಸದುಪಯೋಗಪಡಿಸಿಕೊಳ್ಳಬೇಕು ಎಂದರು ಹಾಗೂ ವಿಶ್ವ
ಪುಸ್ತಕ ದಿನದ ಮಹತ್ವದ ಕುರಿತು ಮಾತನಾಡುತ್ತಾ
ಜರ್ಮನಿಯ ಬ್ರೆಕ್ಟ್ ಕವಿ ಬರೆದಿರುವ "ಬರ್ನಿಂಗ್
ದ ಬುಕ್ಸ್" ಎಂಬ ಕವಿತೆಯ ಸಾರಾಂಶವನ್ನು
ಸ್ಮರಿಸಿದರು. ಇದೇ ಸಂದರ್ಭದಲ್ಲಿ ವೈವಿಧ್ಯಮಯ
ಪುಸ್ತಕಗಳನ್ನು ಗ್ರಂಥಾಲಯದಲ್ಲಿ
ಪ್ರದರ್ಶಿಸಲಾಯಿತು. ಸಾರ್ವಜನಿಕರು ಹಾಗೂ
ವಿದ್ಯಾರ್ಥಿಗಳು ಪುಸ್ತಕ ಪ್ರದರ್ಶನವನ್ನು
ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ
ಸುಮಧುರವಾದ ಕಾರ್ಯಕ್ರಮವನ್ನು ವಿದ್ಯಾರ್ಥಿ ಚರಣ್
ರಾಜ್ ಆರ್ ನಿರೂಪಿಸಿದರು, ಪ್ರೊಫೆಸರ್
ಶ್ರೀನಿವಾಸ್ ಬಿ ಸ್ವಾಗತಿಸಿದರು, ಪ್ರಾಧ್ಯಾಪಕ
ಭರತ್ ವಂದಿಸಿದರು. ಕಾರ್ಯಕ್ರಮದಲ್ಲಿ ಇತರರು
ಉಪಸ್ಥಿತರಿದ್ದರು.
ದಿನಾಂಕ:22-.04-.2025 ನೇ ಮಂಗಳವಾರದಂದು
ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಪ್ರಥಮ ದರ್ಜೆ ಕಾಲೇಜಿನಲ್ಲಿ ಭೂಗೋಳಶಾಸ್ತ್ರ
ವಿಭಾಗ, ಇಕೋ ಕ್ಲಬ್, ಎನ್.ಎಸ್.ಎಸ್. ಅಟಲ್ ಭೂಜಲ್
ಯೋಜನೆ ಮತ್ತು ಐ.ಕ್ಯೂ.ಎ.ಸಿ. ಸಹಯೋಗದೊಂದಿಗೆ
ಭೂ ದಿನಾಚರಣೆ ಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ
ಪ್ರಾಂಶುಪಾಲರಾದ ಡಾ.ಟಿ.ಆರ್.ವಿಜಯಕುಮಾರಿ ಅವರು
ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಸರ್ಕಾರಿ
ಪ್ರಥಮ ದರ್ಜೆ ಕಾಲೇಜು ತುಮಕೂರಿನ ಉಪನ್ಯಾಸಕರಾದ
ಶ್ರೀ ಹೇಮಂತ್ ಕುಮಾರ್.ಕೆ.ಆರ್. ಅವರು ಭೂಮಿಯ
ಸಂರಕ್ಷಣೆಯಲ್ಲಿ ಯುವಕರ ಪಾತ್ರವನ್ನು ತಿಳಿಸಿದರು.
ನಂತರ ಶ್ರೀಮತಿ ಕುಸುಮ.ಎಂ.ಎಸ್. ಆರ್ಥಿಕ
ಸಾಕ್ಷರತಾ ಸಮಾಲೋಚಕರು ಕೆನರಾ ಬ್ಯಾಂಕ್,
ಅರಸೀಕೆರೆ. ಇವರು ಮಾತನಾಡಿ ಈ ಭೂಮಿಯ ಜಲವನ್ನು
ಸಂರಕ್ಷಿಸುವಲ್ಲಿ ಪ್ರತಿಯೊಬ್ಬರ ಪಾತ್ರವನ್ನು
ವಿವರಿಸಿದರು. ವಿದ್ಯಾರ್ಥಿಗಳಾದ ರಮ್ಯ
ನಿರೂಪಿಸಿದರು. ಪ್ರಾಧ್ಯಾಪಕರಾದ ಎ.ಎಂ.ಕಾಂತರಾಜು
ಸ್ವಾಗತಿಸಿದರು. ವಿದ್ಯಾರ್ಥಿ ರಿಜ್ವಾನ್
ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರು ಮತ್ತು
ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದಿನಾಂಕ:-12.03.2025
ರಂದು ಕಲ್ಪತರು ವಿದ್ಯಾ ಸಂಸ್ಥೆಯ ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ
ಕಾಲೇಜು,ತಿಪಟೂರಿಗೆ ಹೊಸ ಪ್ರಾಂಶುಪಾಲರಾಗಿ ಡಾ.
ಟಿ ಆರ್ ವಿಜಯ ಕುಮಾರಿ ಅವರು ಕರ್ತವ್ಯವನ್ನು
ವಹಿಸಿಕೊಂಡರು.
ದಿನಾಂಕ:10-10-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರಿನ ಮನೋ
ವಿಜ್ಞಾನ ವಿಭಾಗದಲ್ಲಿ ಆಯುಧ ಪೂಜೆಯನ್ನು
ಆಚರಿಸಲಾಯಿತು.
ದಿನಾಂಕ:02-10-2024
ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಕಾಲೇಜು ತಿಪಟೂರಿನಲ್ಲಿ ಗಾಂಧಿ ಜಯಂತಿ ಮತ್ತು
ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಯನ್ನು
ಆಚಾರಿಸಲಾಯಿತು. ಪ್ರಾಂಶುಪಾಲರಾದ ಡಾ ಜಿ ಎನ್
ಉಮೇಶ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು,
ಸಂಪನ್ಮೂಲ ಅಧಿಕಾರಿಯಾಗಿ ಡಾ. ಲಲಾಟಾಕ್ಷಮೂರ್ತಿ
ಇತಿಹಾಸ ವಿಭಾಗ ಆಗಮಿಸಿದ್ದರು, ಎನ್ಎಸ್ಎಸ್
ಅಧಿಕಾರಿಗಳಾದ ಸಿಎಂಎಸ್ ಲೋಕೇಶ್ವರಯ್ಯ ,
ಶ್ರೀನಿವಾಸ ಬಿ, ಎಂಸಿ ಯೋಗಾನಂದ ರವರು
ಆಗಮಿಸಿದ್ದರು, ಡಾ.ಟಿ ಆರ್ ವ
ದಿನಾಂಕ:
30-09-2024ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ &
ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ ಹೆಚ್
ಆರ್ ಧನಂಜಯ , ಸಹ ಪ್ರಾಧ್ಯಾಪಕರು, ಅರ್ಥಶಾಸ್ತ್ರ
ವಿಭಾಗ ಇವರು ವಯೋನಿವೃತ್ತಿ ಹೊಂದಿದರು.
ದಿನಾಂಕ:05-09-2024
ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಕಾಲೇಜು, ತಿಪಟೂರಿನಲ್ಲಿ ಶಿಕ್ಷಕರ ದಿನಾನಾಚರಣೆ
ನಡೆಸಲಾಯಿತು.
ದಿನಾಂಕ:20-08-2024
ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಕಾಲೇಜು, ತಿಪಟೂರಿನಲ್ಲಿ ರಾಜೀವ್ ಗಾಂಧಿ
ಸದ್ಭಾವನಾ ದಿನವನ್ನು ಆಚರಿಸಲಾಯಿತು.
ದಿನಾಂಕ:15-08-2024
ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಕಾಲೇಜು, ತಿಪಟೂರಿನಲ್ಲಿ ಸ್ವಾತಂತ್ರೋತ್ಸವವನ್ನು
ನೆರವೇರಿಸಲಾಯಿತು.
ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರು ಕನ್ನಡ
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ರೇಣುಕಾ ಡಿ ರವರು
ದಿನಾಂಕ:07-08-2024 ರಂದು ತುಮಕೂರು
ವಿಶ್ವವಿದ್ಯಾಲಯದಿಂದ PhD ಪದವಿಯನ್ನು ಪಡೆದರು.
ದಿನಾಂಕ:07-08-2024
ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಕಾಲೇಜು, ತಿಪಟೂರಿನಲ್ಲಿ ಸ್ನಾತಕೋತ್ತರ ಪದವಿ
ಎಂ.ಕಾಂ ವಿಭಾಗದ ದಿಂದ ದ್ವಿತೀಯ ಎಂಕಾಂ
ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ನೀಡಲಾಯಿತು ಹಾಗೂ
ಬೋಧಕರಿಗೆ ಗೌರವಿಸಲಾಯಿತು.
ದಿನಾಂಕ:01-08-2024
ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಕಾಲೇಜು, ತಿಪಟೂರಿನಲ್ಲಿ ತೃತೀಯ ಬಿ.ಎ ಮನೋ
ವಿಜ್ಞಾನ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ನೀಡಲಾಯಿತು.
ದಿನಾಂಕ:02-08-2024
ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ
ಕಾಲೇಜು, ತಿಪಟೂರಿನಲ್ಲಿ ಪ್ರತಿಭಾಶ್ರೀ
ನಡೆಸಲಾಯಿತು.
Invited me as the
Chief Guest Tagore High School. Tiptur
ದಿನಾಂಕ:
31-07-2024ರಂದು ಪಲ್ಲಾಗಟ್ಟಿ ಅಡವಪ್ಪ ಕಲಾ &
ವಾಣಿಜ್ಯ ಪ್ರಥಮ ದರ್ಜೆ ಕಾಲೇಜು, ತಿಪಟೂರಿನ
ಮಂಜುನಾಥಸ್ವಾಮಿ, ಸಹಾಯಕ ಪ್ರಾಧ್ಯಾಪಕರು,
ಭೂಗೋಳಶಾಸ್ತ್ರ ವಿಭಾಗ ಇವರು ವಯೋನಿವೃತ್ತಿ
ಹೊಂದಿದರು.
ಶ್ರೀನಿವಾಸ ಬಿ
ರವರಿಗೆ ಕ್ರೀಡಾ ರತ್ನ ರಾಷ್ಟ್ರೀಯ ಪ್ರಶಸ್ತಿ ತಿಪಟೂರಿನ ಕಲ್ಪತರು ವಿದ್ಯಾಸಂಸ್ಥೆಯ ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ
ಕಾಲೇಜಿನಲ್ಲಿ ಖಾಯಂ ದೈಹಿಕ ಶಿಕ್ಷಣ
ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ
ಶ್ರೀನಿವಾಸ ಬಿ ರವರಿಗೆ ದಿನಾಂಕ 28-07-2024
ರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ
ಭವನದಲ್ಲಿ " ರಾಷ್ಟ್ರೀಯ ಕ್ರೀಡಾ ರತ್ನ"ಪ್ರಶಸ್ತಿ ನೀಡಲಾಯಿತು.
ದಿನಾಂಕ:26-07-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ
ಪ್ರತಿಭಾಶ್ರೀ ಪ್ರಯಕ್ತ ಎತ್ನಿಕ್ ಡೇ ಕಾರ್ಯಕ್ರಮ
ನಡೆಸಲಾಯಿತು.
ದಿನಾಂಕ:25-07-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ
ಪ್ರತಿಭಾಶ್ರೀ ಪ್ರಯಕ್ತ ಬ್ಯಾನರ್ ಉದ್ಷಾಟನೆ
ಕಾರ್ಯಕ್ರಮ ನಡೆಸಲಾಯಿತು.
ಸೋಮನ ಕುಣಿತ ಪವನ್
ಕೆ ಡಿ ಮತ್ತು ಶಶಾಂಕ ಎಸ್
ದಿನಾಂಕ:26-07-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ
ಪ್ರತಿಭಾಶ್ರೀ ಪ್ರಯಕ್ತ ಪರಂಪರಿಕ ದಿನದ
ಕಾರ್ಯಕ್ರಮ ನಡೆಸಲಾಯಿತು.
ದಿನಾಂಕ:22-07-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ
ಕನ್ನಡ, ಇಂಗ್ಲಿಷ್ ಮತ್ತು IQAC ವತಿಯಿಂದ ಕವಿ
ಕೃತಿ ಪರಿಚಯ ಎಂಬ ಕಾರ್ಯಕ್ರಮವನ್ನು
ಆಯೋಜಿಸಲಾಗಿತು.
ದಿನಾಂಕ:19-07-2024
ರಿಂದ 20-07-2024ರ ದಿನಗಳಂದು ಕುವೆಂಪು ವಿಶ್ವ
ವಿದ್ಯಾಲಯಕ್ಕೆ ಶೈಕ್ಷಣಿಕ ಪ್ರವಾಸ
ಕೈಗೊಳ್ಳಲಾಗಿತು.
ನ್ಯಾಕ್ ಪೀರ್ ಕಮಿಟಿಯೊಂದಿಗೆ ಸಾಂಸ್ಕೃತಿಕ
ಕಾರ್ಯಕ್ರಮ
2023-24 ನೇ
ಸಾಲಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಅಂತರ
ಕಾಲೇಜು ಪುರುಷರ ಟೇಬಲ್ ಟೆನ್ನಿಸ್
ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ನಮ್ಮ
ಕಾಲೇಜಿನ ಕ್ರೀಡಾಪಟುಗಳು.
2023-24ನೇ
ಸಾಲಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಅಂತರ
ಕಾಲೇಜು ಪುರುಷರ ಥ್ರೋಬಾಲ್ ಪಂದ್ಯಾವಳಿಯಲ್ಲಿ
ದ್ವಿತೀಯ ಸ್ಥಾನ ಪಡೆದ ನಮ್ಮ ಕಾಲೇಜಿನ
ಕ್ರೀಡಾಪಟುಗಳು.
2023-24 ನೇ
ಸಾಲಿನಲ್ಲಿ ತೂಮಕೂರು ವಿಶ್ವವಿದ್ಯಾನಿಲಯದ ಪುರುಷ
ಮತ್ತು ಮಹಿಳೆಯರ ಅಂತರ ಕಾಲೇಜು ಅಥ್ಲೆಟಿಕ್ಸ್
ಕ್ರೀಡಾಕೂಟದಲ್ಲಿ ವೈಯುಕ್ತಿಕ ಚಾಂಪಿಯನ್
ಪ್ರಶಸ್ತಿ ಪಡೆದ ನಮ್ಮ ಕಾಲೇಜಿನ ಹೆಮ್ಮೆಯ
ಕ್ರೀಡಾಪಟುಗಳು ಶಶಾಂಕ್ ವರ್ಮಾ. ಎಸ್.,ಪ್ರಥಮ
ಬಿ. ಎ. ಹಾಗು ತೃತೀಯ ಬಿ. ಕಾಂ. ವಿದ್ಯಾರ್ಥಿ
ಶ್ರೇಯ. ಎಂ.
2023-24 ನೇ
ಸಾಲಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಅಂತರ
ಕಾಲೇಜು ಪುರುಷರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ
"ಗ್ರೂಪ್ ಚಾಂಪಿಯನ್ "ಪ್ರಶಸ್ತಿ ಪಡೆದ ನಮ್ಮ
ಕಾಲೇಜಿನ ಹೆಮ್ಮೆಯ ಕ್ರೀಡಾಪಟುಗಳು.
ದಿನಾಂಕ:15-07-2024
ರಂದು ಪ್ರತಿಭಾಶ್ರೀ 2024 ಪ್ರಯುಕ್ತ ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು,
ತಿಪಟೂರಿನಲ್ಲಿ ಮೆಹಂದಿ ಸ್ಪರ್ಧೆ ನಡೆಸಲಾಯಿತು.
ದಿನಾಂಕ:13-07-2024
ರಂದು ಪ್ರತಿಭಾಶ್ರೀ 2024 ಪ್ರಯುಕ್ತ ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು,
ತಿಪಟೂರಿನಲ್ಲಿ ಏಕಪಾತ್ರಾಭಿನಯ ಸ್ಪರ್ಧೆ
ನಡೆಸಲಾಯಿತು.
ದಿನಾಂಕ:15-07-2024
ರಂದು ಪ್ರತಿಭಾಶ್ರೀ 2024 ಪ್ರಯುಕ್ತ ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು,
ತಿಪಟೂರಿನಲ್ಲಿ ಬೆಂಕಿ ರಹಿತ ಅಡಿಗೆ ತಯಾರಿ
ಸ್ಪರ್ಧೆ ನಡೆಸಲಾಯಿತು.
ದಿನಾಂಕ:12-07-2024
ರಂದು ಪ್ರತಿಭಾಶ್ರೀ 2024 ಪ್ರಯುಕ್ತ ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜು,
ತಿಪಟೂರಿನಲ್ಲಿ ರಂಗೋಲಿ ಸ್ಪರ್ಧೆ ನಡೆಸಲಾಯಿತು.
ದಿನಾಂಕ:12-07-2024 ರಂದು ಪ್ರತಿಭಾಶ್ರೀ 2024
ಪ್ರಯುಕ್ತ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು
ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ ಆಶುಭಾಷಣ
ಸ್ಪರ್ಧೆ ನಡೆಸಲಾಯಿತು.
ದಿನಾಂಕ:12-07-2024 ರಂದು ಪ್ರತಿಭಾಶ್ರೀ 2024
ಪ್ರಯುಕ್ತ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು
ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ ಚರ್ಚಾ
ಸ್ಪರ್ಧೆ ನಡೆಸಲಾಯಿತು.
ದಿನಾಂಕ:11-07-2024 ರಂದು ಪ್ರತಿಭಾಶ್ರೀ 2024
ಪ್ರಯುಕ್ತ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು
ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ ಜನಪದ ಗೀತೆ
ಮತ್ತು ಕನ್ನಡ ಚಿತ್ರ ಗೀತೆ ಸ್ಪರ್ಧೆಗಳನ್ನು
ನಡೆಸಲಾಯಿತು.
ದಿನಾಂಕ:10-07-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ
ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಯಿತು.
Date:28-06-2024 Programme Title :-A Talk
on practicals in Commerce Education By
Srinivasamurthy & Vadiraj katti founder
directors of Energy Company.
25th June 2024 final year B com and Mcom
students of our college have visited
Vikranth plant , JK tyre & TVS Mysuru.
Date:27-05-2024 Work shop on Company
analysis report by Dr.Devarajappa,
Tumkur university Organised by
Department of Commerce
Date:25-05-2024 A special lecturer
Programme on Guidelines for Chartered
Accountant course By CA Shubha Organised
by Department of Commerce
Date:15-05-2024 Emerging technologies
for career development and resume
Building programme, organised by
Department of Commerce
Date:09-05-2024 Pre placement training
programme, organised by Department of
Commerce
ನ್ಯಾಕ್ ಪೀರ್ ತಂಡದೊಂದಿಗೆ ಕಾಲೇಜಿನ
ಪ್ರಾಂಶುಪಾಲರು ಹಾಗೂ ಅಧ್ಯಾಪಕರು
ನ್ಯಾಕ್ ಪೀರ್ ತಂಡದೊಂದಿಗೆ ಕಾಲೇಜಿನ
ಪ್ರಾಂಶುಪಾಲರು ಹಾಗೂ ಅಧ್ಯಾಪಕೇತರರು
ದಿನಾಂಕ:05-07-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರಿನಲ್ಲಿ
ಅರ್ಥಶಾಸ್ತ್ರ ವಿಭಾಗದಿಂದ ಸೆಮಿನಾರ್
ಏರ್ಪಡಿಸಲಾಯಿತು.
ದಿನಾಂಕ:30-06-2024 ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ
ಪ್ರಾಧ್ಯಾಪಕರಾದ ಪ್ರೊ.ಟಿ.ಎಸ್.ಕಾಂತರಾಜಯ್ಯ ರವರು
ವಯೋ ನಿವೃತ್ತಿ ಹೊಂದಿದರು.
ದಿನಾಂಕ:31-05-2024 ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜಿನ ಭೂಗೋಳಶಾಸ್ತ್ರ
ವಿಭಾಗದ ಪ್ರಾಧ್ಯಾಪಕರಾದ ಪ್ರೊ.ನಿಂಗೇಗೌಡ.ಎಂ.ಕೆ
ರವರು ವಯೋ ನಿವೃತ್ತಿ ಹೊಂದಿದರು.
ಡಾ. ಎಸ್ ವಿ ಉದಯರವಿ ಶಾಸ್ತ್ರಿ ರವರು ಇಂಗ್ಲಿಷ್
ವಿಭಾಗ, ದಿನಾಂಕ:30-03-2024ರಂದು ನಡೆದ
ಬೀಳ್ಕೊಡುಗೆ ಸಮಾರಂಭದ ಫೋಟೋ.
ದಿನಾಂಕ:14-04-2024ರಂದು ಪಲ್ಲಾಗಟ್ಟಿ ಅಡವಪ್ಪ
ಕಾಲೇಜಿನಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್
ಜಯಂತಿಯನ್ನು ಆಚರಿಸಲಾಯಿತು.
ದಿನಾಂಕ:30-04-2024 ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜಿನ ಮನೋವಿಜ್ಞಾನ
ವಿಭಾಗ ಉಪನ್ಯಾಸಕರಾದ ಮತ್ತು ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಕಾಲೇಜಿನ
ಪ್ರಾಂಶುಪಾಲರಾದ ಡಾ.ವಿ ಮಾಲತಿ ರವರು ವಯೋ
ನಿವೃತ್ತಿ ಹೊಂದಿದರು.
ದಿನಾಂಕ:30-04-2024 ರಂದು ಪಲ್ಲಾಗಟ್ಟಿ ಅಡವಪ್ಪ
ಕಲಾ ಮತ್ತು ವಾಣಿಜ್ಯ ಕಾಲೇಜು, ತಿಪಟೂರು
ಇಂಗ್ಲಿಷ್ ವಿಭಾಗದ ಉಪನ್ಯಾಸಕರಾದ ಡಾ. ಜಿ ಎನ್
ಉಮೇಶ್ ರವರು ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು
ವಾಣಿಜ್ಯ ಕಾಲೇಜಿಗೆ ಪ್ರಾಂಶುಪಾಲರಾಗಿದ್ದಾರೆ.
ದಿನಾಂಕ : 10-05-2024 ರಂದು ನಡೆದ ಪಲ್ಲಾಗಟ್ಟಿ
ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ
ಕಾಲೇಜು, ತಿಪಟೂರಿ ನಲ್ಲಿ `ಬಸವ ಜಯಂತಿ`
ಆಚರಿಸಲಾಯಿತು.